Posts

ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಪಡೆಯುವ ಮಹಿಳೆಯರೇ ಎಚ್ಚರ...!

Image
ತುಮಕೂರು: ಸಾಲದ ಕಿರುಕುಳ ಅಷ್ಟೇ ಅಲ್ಲಾ ಲೈಂಗಿಕ ಕಿರುಕುಳ ನೀಡ್ತಿದ್ದಾರೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ.  ಸಾಲ ವಸೂಲಾತಿ ನೆಪದಲ್ಲಿ ನಿಮ್ಮ ಮನೆಯ ಹೆಣ್ಣು ಮಕ್ಕಳ ಮೇಲೆ ಎರಗುತ್ತಾರೆ ದೂತರು. ಮೈಕ್ರೋ ಫೈನಾನ್ಸ್ ಗಳಲ್ಲಿದ್ದಾರೆ ರೇಪಿಸ್ಟ್ ಗಳು... ತುಮಕೂರಿನಲ್ಲಿ ಸಾಲ ವಸೂಲಾತಿ ನೆಪದಲ್ಲಿ ಮನೆಗೆ ನುಗ್ಗಿ ಬಾಲಕಿ ಮೇಲೆ ಎರಗಿದ ಮೈಕ್ರೋ ಫೈನಾನ್ಸ್ ಸಿಬ್ಬಂದಿ. ತುಮಕೂರು‌ ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹಂದನಕೆರೆಯಲ್ಲಿ ನಡೆದಿದೆ ಭಯಾನಕ ಘಟನೆ. 17 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪಾಪಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ. ಐಐಎಫ್ ಎಲ್ ಕಂಪನಿಯ ಸಮಸ್ತ ಹೆಸರಿನ‌ ಮೈಕ್ರೋ ಫೈನಾನ್ಸ್ ಸಿಬ್ಬಂದಿ. ಸಮಸ್ತ ಮೈಕ್ರೋ ಫೈನಾನ್ಸ್ ಸಿಬ್ಬಂದಿ  ಕಿರಣ್ (24)ಎಂಬಾತನಿಂದ ಪೈಶಾಚಿಕ ಕೃತ್ಯ. ಏಪ್ರಿಲ್ 24 ,ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ. ಸಾಲ ವಸೂಲಿಗೆ ಹೋದ ವೇಳೆ  ಬಾಲಕಿ ಒಬ್ಬಳೆ ಮನೆಯಲ್ಲಿ ಇದ್ದದ್ದನ್ನ ಕಂಡು ಅತ್ಯಾಚಾರಕ್ಕೆ ಯತ್ನ. ಅತ್ಯಾಚಾರಕ್ಕೆ ಸ್ಪಂದಿಸದೆ ಕಿರುಚಾಡಿದ ಬಾಲಕಿ ಮೇಲೆ ಮಾರಣಾಂತಿಕ ಹಲ್ಲೆ. ಬಾಲಕಿಯ ಕುತ್ತಿಗೆ ಬುಜ ಸೇರಿದಂತೆ ವಿವಿಧ ಕಡೆ ಗಾಯಗೊಳಿಸಿರುವ ಕೀಚಕ. ಆರೋಪಿಯನ್ನ ಬಂದಿಸಿ ಎಡೆಮುರಿ ಕಟ್ಟಿ ಜೈಲಿಗಟ್ಟಿರುವ ಪೊಲೀಸರು. ಎರಡೇ ದಿನದಲ್ಲಿ ಆರೋಪಿಯನ್ನ ಪತ್ತೆ ಹಚ್ಚಿ ಬಂದಿಸಿದ ಹಂದನಕೆರೆ ಪೊಲೀಸರು. ಹಂದನಕರೆ‌ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ಪೋಕ್ಸೋ...

ಜಾತಿ ನಿಂದನೆ ಸುಳ್ಳು ಕೇಸು ದಾಖಲಾಗಿದೆ.

Image
ಈ ದೇಶದ ಸ್ವತಂತ್ರ ಹೋರಾಟ ಗಾರರ ಮಗ ಹಾಗು ರಾಜ್ಯ ನಿರಾವರಿ ಹೋರಾಟಗಾರ. ಡಾ. ಮದು ಸೀತಪ್ಪ ಮತ್ತು ಇವರ ಬೆಂಬಲಿಗರಾದ ಶಾಂತರಾಜು. ಈ ಇಬ್ಬರ ಮೇಲೆ ಜಾತಿ ನಿಂದನೆ ಎಂಬ ಸುಳ್ಳು ಕೇಸು ದಾಖಲಾಗಿದೆ     ಈ ಪ್ರಕರಣ ವನ್ನು ವಾಪಾಸ್ ಪಡಿಯಬೇಕು ಎಂದು ಪಾತಪಾಳ್ಯ ಪೊಲೀಸ್ ಠಾಣೆ ಮುಂದೆ ಶನಿವಾರ ಧರಣಿ ಸತ್ಯಾಗ್ರಹ ವನ್ನು ಸೂರ್ಯನಾರಾಯಣರೆಡ್ಡಿ. ರಾಜರೆಡ್ಡಿ ರಮೇಶ್ ಕುಮಾರ್.. ಮತ್ತು ವಕೀಲರು ಸಿತೇಶ್ ರೆಡ್ಡಿ. ಇವರ ನೇತೃತ್ವದಲ್ಲಿ ಅನೇಕ ಬೆಂಬಲಿಗರೊಂದಿಗೆ ನಡಿಯುತು. ಚೇಳೂರು ತಾಲೂಕಿನ ಯಾರ್ರ ಗುಡಿ. ಗ್ರಾಮದಲ್ಲಿ ಹುಣಿಸೆ ಮರದ ವಿಚಾರವಾಗಿ ವಾಗವಾದ ನಡಿಸಿದ ಶಾಸಕ ಸುಬ್ಬಾರೆಡ್ಡಿ ಬೆಂಬಲಿಗರು ಜಾತಿ ನಿಂದನೆ ಕೇಸು ದಾಖಲಿಸಿದ್ದಾರೆ.  ಈ ಹಿಂದೆ ಶಾಸಕರ ಮೇಲೆ ಅಕ್ರಮ ಅಸ್ತಿ ಗಳ ಬಗ್ಗೆ. ಮದು ಸೀತಪ್ಪ ಆರೋಪ ಮಾಡಿದ್ದರು ಎಂದು. ಮದು ಸೀತಪ್ಪ. ಸ್ಥಳದಲ್ಲಿ ಇಲ್ಲದಿದ್ದರೂ ಇವರ ಮೇಲೆ ಮತ್ತು ಶಾಂತರಾಜು ಇವರ ಮೇಲೆ ಸುಳ್ಳು ಕೇಸು ದಾಖಲಿಸಿ ದ್ದಾರೆ ಎಂದು ಸೂರ್ಯ ನಾರಾಯಣರೆಡ್ಡಿ ಮೋಹನ್ ರೆಡ್ಡಿ ಆರೋಪಿಸಿದ್ದಾರೆ  ಡಾ. ಮದು ಸೀತಪ್ಪ ಪಾಮ್ ಹೌಸ್.ಮುಂದೆ ಬಂದು ದೌರ್ಜನ್ಯ ಮಾಡಿ ಹಲ್ಲೆ ನಡಿಸಿ ಗಲಾಟೆ ನಡಿಸಿದ ಶಾಸಕರ ಬೆಂಬಲಿಗರಮೇಲೆ ಕೇಸು ದಾಖಲಿಸಿ ನಮಗೆ ನ್ಯಾಯ. ಮತ್ತು ರಕ್ಷಣೆ ಕೊಡಿಸಬೇಕು ಎಂದು ಒತ್ತಾಯ ಮಾಡಿದರು

ಯುವತಿಯೊಬ್ಬಳು ಆತ್ಮಹತ್ಯೆ

Image
ಗದಗ : ಲವರ್​ ಬ್ಲಾಕ್​ಮೇಲ್​ಗೆ ಹೆದರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದ್ದು. ಆತ್ಮಹತ್ಯೆಗೆ ಶರಣಾದ ಯುವತಿಯನ್ನು 29 ವರ್ಷದ ಸೈರಬಾನು ನದಾಫ್​ ಎಂದು ಗುರುತಿಸಲಾಗಿದೆ. ಗದಗ ಜಿಲ್ಲೆಯ, ಅಸುಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಮೃತ ಯುವತಿ ಸೈರಭಾನು ಖಾಸಗಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ನ್ಯಾಷನಲ್ ಲೇವಲ್ ಕುಸ್ತಿಪಟು ಆಗಿ ಖ್ಯಾತಿ ಪಡೆದಿದ್ದ ಸೈರಭಾನು. ಹತ್ತಾರು ಮೆಡಲ್, ಕಪ್ ಗೆದ್ದು ಸಾಕಷ್ಟು ಹೆಸರು ಮಾಡಿದ್ದಳು. ಮನೆಯಲ್ಲಿ ಗಂಡುಮಕ್ಕಳು ಇಲ್ಲದ ಕಾರಣ ಮನೆಯ ಎಲ್ಲಾ ಜವಬ್ದಾರಿಗಳನ್ನು ತಾನೇ ಹೊತ್ತಿದ್ದಳು. ಕಳೆದ 5 ವರ್ಷಗಳಿಂದ ಮೈಲೇರಿ ಎಂಬಾತನನ್ನು ಪ್ರೀತಿ ಮಾಡುತ್ತಿದ್ದ ಸೈರಾಭಾನು. ಕಳೆದ ಕೆಲ ದಿನಗಳ ಹಿಂದೆ ಆತನಿಂದ ಬ್ರೇಕ್​ಅಪ್​ ಮಾಡಿಕೊಂಡಿದ್ದಳು. ಬ್ರೇಕ್​ಮಾಡಿಕೊಂಡ ನಂತರ ಮನೆಯಲ್ಲಿ ನೋಡಿದ್ದ ಯುವಕನನ್ನು ಒಪ್ಪಿದ್ದ ಈಕೆ ಮದುವೆಗೂ ಸಿದ್ದತೆ ನಡೆಸಿದ್ದಳು. ಆದರೆ ಪ್ರೇಯಸಿಯ ಮದುವೆ ತಿಳಿದು ಆಕ್ರೋಶಗೊಂಡಿದ್ದ ಮೈಲೇರಿ ಇಬ್ಬರು ಜೊತೆಗಿದ್ದ ಪೋಟೋ, ವಿಡಿಯೋಗಳನ್ನು ವೈರಲ್​ ಮಾಡುವುದಾಗಿ ಬ್ಲಾಕ್​ಮೇಲ್​ ಮಾಡಲು ಆರಂಭಿಸಿದ್ದನು. ಇದರಿಂದ ಮಾನಸಿಕವಾಗಿ ಖಿನ್ನಳಾಗಿದ್ದ ಸೈರಾಭಾನು ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದು, ಪೋಷಕರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿ...

ಬಂತು ಹೊಸ ಕಾರ್ಡ್ ಯಾರಿಗೆ ಅಂತ ನೋಡಿ!

Image
ರಾಜ್ಯದ ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ನೀಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿಗಳ ಪೈಕಿ ಒಂದಾದ ಶಕ್ತಿ ಯೋಜನೆಗೆ ಮತ್ತಷ್ಟು ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಬಸ್‌ನಲ್ಲಿ ಪ್ರಯಾಣ ಮಾಡುವಾಗ ಆಧಾರ್ ಕಾರ್ಡ್ ಬದಲು ಸ್ಮಾರ್ಟ್  ಕಾರ್ಡ್‌ಗಳನ್ನು ನೀಡಲು ತೀರ್ಮಾನಿಸಲಾಗಿದೆ. ಶಕ್ತಿ ಯೋಜನೆಯ ಲಾಭವನ್ನು ಇನ್ನಷ್ಟು ಸರಳವಾಗಿ ಪಡೆಯಲು ಸರ್ಕಾರ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ನಿರ್ಧಾರ ಕೈಗೊಂಡಿದೆ. #ಶಕ್ತಿಯೋಜನೆ #shaktiyojane

ಜನಿವಾರ ವಿಷಯ ಸಿಬ್ಬಂದಿ ಅಮಾನತ್ತಿಗೆ ಕಾರಣವಾಯಿತಾ?

Image
ಬೀದರ್:  CET Exam ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಬಿಚ್ಚಿಸಿದ್ದ ಪ್ರಕರಣ ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಬೀದರ್ ಜಿಲ್ಲಾಧಿಕಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದು ಅಧಿಕಾರದ್ದೇ ತಪ್ಪು ಎಂದು ಹೇಳಿದ್ದು ಬೀದರ್​ನ ಖಾಸಗಿ ಕಾಲೇಜಿನ ಪ್ರಾಂಶುಪಾಲ ಮತ್ತು ಕೆಲವು ಸಿಬ್ಬಂದಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಕೆ.ಜಿ. ಜಗದೀಶ್​ ಆದೇಶ ಹೊರಡಿಸಿದ್ದಾರೆ. ಬೀದರ್​ನಲ್ಲಿರುವ ಸಾಯಿ ಸ್ಫೂರ್ತಿ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್​ ಚಂದ್ರಶೇಖರ ಬಿರಾದಾರ್ ಹಾಗೂ ಆ ಕಾಲೇಜಿನ ತಪಾಸಣಾ ಸಿಬ್ಬಂದಿ ಸತೀಶ್ ಪವಾರ್ ಅವರನ್ನು ಅಮಾನತು ಮಾಡಲಾಗಿದೆ. ಬೀದರ್​​ನ ಸಾಯಿ ಸ್ಫೂರ್ತಿ ಪದವಿ ಪೂರ್ವ ಕಾಲೇಜು ಖಾಸಗೀ ಕಾಲೇಜಾಗಿರುವುದರಿಂದ ಹಾಗೂ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಈ ಆದೇಶ ಹೊರಡಿಸಲಾಗಿದೆ.

ಮಹಾಭಾಯಕನಿಗೆ ಹೀಗೇಕೆ ಅವಮಾನ ಮಾಡಿದ್ರು ಕಿಡಗೇಡಿಗಳು?

Image
ಡಾ. ಅಂಬೇಡ್ಕರ್ ಗೆ ಅಪಮಾನ :  ಸಿಎಂ ಸಿದ್ದರಾಮಯ್ಯ ಕ್ಷೇತ್ರದ ವಾಜಮಂಗಲದಲ್ಲಿ ನೀಚ ಕೃತ್ಯ ಮೈಸೂರು : ಮಹಾನ್ ಮಾನವತಾವಾದಿ, ವಿಶ್ವ ಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಮೈಸೂರು ತಾಲೂಕು ವಾಜಮಂಗಲ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಅವರ  ಭಾವಚಿತ್ರ, ಫ್ಲೆಕ್ಸ್ ಗಳಿಗೆ ಚಪ್ಪಲಿ ಹಾರ ಹಾಕಿ, ಮಲ ಎರಚಿ, ನೀಲಿ ಧ್ವಜಗಳನ್ನು ಹರಿದು ವಿಕೃತಿ ಮೆರೆದಿರುವ ದುರ್ಘಟನೆ ಇಂದು ಜರುಗಿದೆ.  ಶುಕ್ರವಾರ ಮಧ್ಯರಾತ್ರಿ ಕಳೆದು ಇಂದು ಮುಂಜಾನೆ 3ರ ನಡುವೆ ಈ ಕೃತ್ಯ ನಡೆದಿದ್ದು ವಾಜಮಂಗಲ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾ ವ್ಯಾಪ್ತಿಗೆ ಬರುವ ವಾಜಮಂಗಲದಲ್ಲಿ ಈ ಕೃತ್ಯ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಏಪ್ರಿಲ್‌ 14 ರಂದು ಇಲ್ಲಿನ ಸಿದ್ಧಾರ್ಥ ಯುವಕರ ಸಂಘವು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಆಚರಿಸಿ, ಮೆರವಣಿಗೆ, ಅನ್ನದಾನ ಕಾರ್ಯಕ್ರಮ ಜರುಗಿತ್ತು.  ಈ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಡಾ. ಅಂಬೇಡ್ಕರ್ ಅವರ ಫ್ಲೆಕ್ಸ್, ಕಟೌಟ್ ಗಳನ್ನು ಹರಿದು, ಮಲ ಎರಚಿ ವಿಕೃತ ಮೆರೆಯಲಾಗಿದೆ. ನೀಲಿ‌ ಧ್ವಜಗಳನ್ನು ಹರಿದು ಹಾಕಲಾಗಿದೆ. ನೀಚರ ಈ ಕೃತ್ಯದಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು ಬೀದಿಗಿಳಿದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿ...

ಎಸ್ ಎಸ ಯೇಲ ಸಿ ವಿದ್ಯಾರ್ಥಿ ಮಾಡಿದ್ದೇನು? ನೋಡಿ

Image
ಬೆಳಗಾವಿಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೌಲ್ಯಮಾಪನ ಕೇಂದ್ರದಲ್ಲಿ 2025ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೇಪರನ್ನು ಚೆಕ್ ಮಾಡುವಾಗ ಪ್ಲೀಸ್ ನನ್ನನ್ನು ಪಾಸ್ ಮಾಡಿ ನನ್ನ ಲವ್ ನಿಮ್ಮ ಕೈಯಲ್ಲಿದೆ ಎಂದು ಬರವಣಿಗೆ ಜೊತೆಗೆ ಐದು ನೂರು ರುಪಾಯಿ ಹಣ ಪತ್ತೆಯಾಗಿವೆ.  ರಾಜ್ಯದಲ್ಲಿ SSLC ಪರೀಕ್ಷಾ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಲಾಗುತ್ತಿದೆ. ಬೆಳಗಾವಿಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೌಲ್ಯಮಾಪನ ಕೇಂದ್ರದಲ್ಲಿ SSLC ಪರೀಕ್ಷಾ ಮೌಲ್ಯಮಾಪನ ವೇಳೆ ವಿಚಿತ್ರ ಉತ್ತರ ಪತ್ರಿಕೆಗಳು ಪತ್ತೆಯಾಗಿವೆ. ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಪಾಸ್ ಮಾಡುವಂತೆ ವಿಚಿತ್ರವಾಗಿ ಬೇಡಿಕೊಂಡಿದ್ದಾರೆ. ನನ್ನನ್ನು ಪಾಸ್ ಮಾಡಿದ್ರೆ ಅಷ್ಟೇ ನನ್ನ ಲವ್ ಮಾಡುತ್ತೇನೆ ಅಂದಿದ್ದಾಳೆ. ಪ್ಲೀಸ್ ಪಾಸ್ ಮಾಡಿ ನನ್ನ ಲವ್ ನಿಮ್ಮ ಕೈಯಲ್ಲಿದೆ ಎಂದು ಬರವಣಿಗೆ ಜತೆ ಐದು ನೂರು ರುಪಾಯಿ ಹಣ ಪತ್ತೆಯಾಗಿದೆ.  ಐದು ನೂರು ರುಪಾಯಿ ನೀವು ಚಹಾ ಕುಡಿಯಿರಿ ಸರ್ ರಿ ನನ್ನ ಪಾಸ್ ಮಾಡಿ ಎಂದು ಒಂದು ಉತ್ತರ ಪತ್ರಿಕೆಯಲ್ಲಿ ಪತ್ತೆಯಾದರೇ, ಇನ್ನೊಂದು ಪತ್ರಿಕೆಯಲ್ಲಿ ನನ್ನ ಪಾಸ್ ಮಾಡಿದ್ರೆ ಹಣ ಕೊಡುತ್ತೇನೆ ಎಂದು ಬರೆಯಲಾಗಿದೆ.  ಮತ್ತೊಂದು ಪತ್ರಿಕೆಯಲ್ಲಿ ಪ್ಲೀಸ್ ಮಿಸ್ ಅಂಡ್ ಸರ್ ನನ್ನನ್ನು ಪಾಸ್ ಮಾಡಿ ಎಂದು ಬರೆಯಲಾಗಿದ್ದು, ನೀವು ಪಾಸ್ ಮಾಡದಿದ್ದರೆ ನನ್ನ ಅಪ್ಪ ಅಮ್ಮ ಮುಂದೆ ಕಾಲೇಜಿಗೆ ಕಳಿಸಲ್ಲ. ಹೀಗೆ ಹಲವು ಚ...

ಶಿಕ್ಷಕ ಆತ್ಮಹತ್ತೆ ಮಾಡಿಕೊಂಡಿದ್ದಾನೆ ಅಸಲಿಗೆ ಕಾರಣವೇನು?

Image
ಬೆಂಗಳೂರು:  ಆತ ವೃತ್ತಿಯಲ್ಲಿ ಟೀಚರ್, ಟ್ಯೂಷನ್ ನಡೆಸುತ್ತಿದ್ದ ಶಿಕ್ಷಕಿ ಜೊತೆ ಸೇರಿ ಹಣ ಇನ್ವೆಸ್ಟ್ ಮಾಡಿ, ಪಾರ್ಟನರ್ ಆಗಿದ್ದ ಎಂಟು ವರ್ಷಗಳ ಕಾಲ ಜೊತೆಯಲ್ಲಿ ‌ಕಾಲ ಕಳೆದಿದ್ದಾರೆ ಗಂಡನಿಂದ ದೂರವಾಗಿದ್ದ ಆಕೆ ಅವೈಡ್ ಮಾಡ್ತಿದ್ದಾಳೆಂದು ಆತ ಸೂಸೈಡ್ ‌ಮಾಡಿಕೊಂಡಿದ್ದಾನೆ ಹಾಗಾದ್ರೆ ಇಲ್ಲಿ ಆಗಿದ್ದಾದ್ರು ಏನು. ಆತ ಯಾಕೆ ಸೂಸೈಡ್ ಮಾಡಿಕೊಂಡಿದ್ದಾನೆ. ನೆಲಮಂಗಲದ ಮಾಕಳಿಯಲ್ಲಿ ಆನಂದ್ ಜೊತೆ ಸೇರಿ ಟ್ಯೂಷನ್ ಸೆಂಟರ್ ನಡೆಸಿತ್ತಿದ್ದರು, ಹೀಗೆ ಇರಬೇಕಾದ್ರೆ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಮೊದಲೇ ಗಂಡನಿಂದ ದೂರುವಾಗಿದ್ದ ಮಹಿಳೆ ಈತ ಮತ್ತಷ್ಟು ಹತ್ತಿರವಾಗಿದ್ದಾನೆ. ಇನ್ನಷ್ಟು ಡೆವಲಪ್ ಮಾಡೋಣ ಎಂದು ಟ್ಯೂಷನ್ ಸೆಂಟರ್​ಗೆ ಹಣ ಹಾಕಿದ್ದಾನೆ. ಜೊತೆಗೆ ಮನೆಯಿಂದಲೂ‌ ಕೂಡ ಐದು ಲಕ್ಷ ಹಣ ತಂದು ಕೊಟ್ಟಿದ್ದಾನೆ. ಎಂಟು ವರ್ಷಗಳಿಂದ ಜೊತೆಯಲ್ಲಿಯೇ ಕಾಲ‌ ಕಳೆದಿದ್ದಾರೆ. ಆದರೆ, ಇತ್ತೀಚೆಗೆ ಆನಂದ್ ನನ್ನ ಅವೈಡ್ ಮಾಡೋದಕ್ಕೆ ಶುರು ಮಾಡಿದ್ದಾಳೆ. ಇದರಿಂದಾಗಿ ಇಬ್ಬರ ನಡುವೆ ಮನಸ್ತಾಪ ಬಂದು ಜಗಳವಾಗಿದೆ. ನನ್ನನ್ನು ಬಿಟ್ಟು ಬೇರೆಯೊಬ್ಬನ ಜೊತೆ ‌ಸಲುಗೆಯಿಂದ ಇದೆಯಾ ಎಂದು ಜಗಳ ಮಾಡಿಕೊಂಡಿದ್ದಾನೆ.

ಯಾವ ಕಾನೂನಿನಡಿ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರು ವಿಡಿಯೊ ಚಿತ್ರೀಕರಣ ಮಾಡದಂತೆ ನಿಷೇಧಿಸಲಾಗಿದೆ?: ಹೇಳಿ ಗುಜರಾತ್ ಹೈಕೋರ್ಟ್ ನಿಂದ ಪೊಲೀಸರಿಗೆ ತರಾಟೆ

Image
ಕಾನೂನು ವೆವಸ್ಥೆಯನ್ನು ಸುಧಾರಿಸಲು ದಿನ ಒಂದು ಕಾನೂನುಗಳನ್ನ ಜಾರಿಗೊಳಿಸಲಾಗುತ್ತಿದೆ ಆದರಿಂದ ಕಾನೂನಿನಿಂದ ಜನಸಾಮಾನ್ಯರಿಗೆ ಹಿಂಸೆ  ಉಂಟಾಗುತ್ತಿರುವುದು ಸರ್ವೇಸಾಮಾನ್ಯವಾಗಿದೆ ಬಡವರ ಪಾಲಿಗೆ ನ್ಯಾಯ ಸಿಗದೇ ಉಳ್ಳವರು ಪಾಲಾಗುತ್ತಿದೆ ಹಾಗಾಗಿ ಉಳ್ಳವರೆಂದರೆ ಶ್ರೀಮಂತರಷ್ಟೇ ಅಲ್ಲ ಅಧಿಕಾರಿ ವರ್ಗಂತಲು ಹೇಳಬಹುದು ಅಧಿಕಾರಿ ವರ್ಗ ಜನಸೇವೆಯನ್ನು ಮಾಡುವುದನ್ನು ಬಿಟ್ಟು ಜನಸಾಮಾನ್ಯರಿಗೆ ತೊಂದರೆ ಕೊಡುವಂತಹ ಕೆಲ ಸ್ಥಳಗಳಲ್ಲಿ ಕೆಲ ವ್ಯಕ್ತಿಗಳನ್ನ ನೋಡಬಹುದು ಹಾಗಾಗಿ ಕೆಲ ವ್ಯಕ್ತಿಗಳು ಪೊಲೀಸ್ ಠಾಣೆಯಲ್ಲಿ ನ್ಯಾಯಕ್ ಎಂದು ಹೋದಾಗ ಅನ್ಯಾಯವನ್ನ ಅಲ್ಲೂ ಕೂಡ ಕಾಣಬಹುದಾಗಿದೆ ಅನ್ಯಾಯದ ವಿರುದ್ಧ ತಮ್ಮ ಮೊಬೈಲ್ ನಲ್ಲಿ ಅನ್ಯಾಯದ ಚಿತ್ರೀಕರಣವನ್ನು ಮಾಡಲು ಮುಂದಾದಾಗ ಕೆಲವೊಂದು ಇಲಾಖೆಯ ಅಧಿಕಾರಿಗಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರತಕ್ಕಂತ ಅಧಿಕಾರಿಗಳು ತಮ್ಮ ಪೊಲೀಸ್ ಠಾಣೆಯಲ್ಲಿ ವಿಡಿಯೋ ಮಾಡಿದಂತೆ ಮುತುವರ್ಜಿ ವಹಿಸುತ್ತಿದ್ದಾರೆ ಇದರಿಂದ ಬೇಸತ್ತ ನ್ಯಾಯಾಲಯ ನಿಮಗೆ ನಮ್ಮ ದೇಶದ ಯಾವ ನ್ಯಾಯಾಲಯ ಪೊಲೀಸ್ ಠಾಣೆಯಲ್ಲಿ ವಿಡಿಯೋ ಮಾಡಬಾರದೆಂದು ಯಾವ ಕಾನೂನಿನ ಅಡಿಯಲ್ಲಿ ತಿಳಿಸಲಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ ನೆಟ್ಟಿಗರು ಇದಕ್ಕೆ ಶಹಬ್ಬಾಸ್ ಗಿರಿಯನ್ನು ನೀಡಿದ್ದಾರೆ. ಯಾವ ಕಾನೂನಿನಡಿ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರು ವಿಡಿಯೊ ಚಿತ್ರೀಕರಣ ಮಾಡದಂತೆ ನಿಷೇಧಿಸಲಾಗಿದೆ ಗುಜರಾತ್ ಹೈಕೋರ್ಟ್ ನಿಂದ ಪೊಲೀಸರಿಗೆ ತರ...

ಕನ್ನಂಬಾಡಮ್ಮ ದೇವಿಯ ನೂತನ ದೇವಸ್ಥಾನ ಲೋಕಾರ್ಪಣೆ,

Image
ಹಾಸನ ಜಿಲ್ಲಾ ಅರಕಲಗೂಡು ತಾಲೂಕು ಅತ್ನಿ, ಉಪ್ಪಾರ ಕೊಪ್ಪಲು ಗ್ರಾಮದಲ್ಲಿ ಇಂದು ಬೆಳಿಗ್ಗೆ ಶ್ರೀ ಆದಿಶಕ್ತಿ ಅಂತರಘಟ್ಟಮ್ಮ ದೇವಿ ಹಾಗೂ ಶ್ರೀ ಕನ್ನಂಬಾಡಮ್ಮ ದೇವಿಯ ನೂತನ ದೇವಸ್ಥಾನ ಲೋಕಾರ್ಪಣೆ, ಕಳಶರೋಹಣ, ಧಾರ್ಮಿಕ ಸಮಾರಂಭದಲ್ಲಿ ನೂರಾರು ಸುಮಂಗಳೆಯರು ಕಳಶ, ಹಿಡಿದು ಕುಂಭಗಳನ್ನು ಹೊತ್ತು ದೇವರ ಉತ್ಸವ ಮೂರ್ತಿಯೊಂದಿಗೆ ಹೊಳೆ ಪೂಜೆ ಮಾಡಿಕೊಂಡು ಶ್ರೀ ಭಗೀರಥಗುರುಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಡಾ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳನ್ನು ಮೆರವಣಿಗೆ ಮೂಲಕ ಅದ್ದೂರಿಯಾಗಿ ಭಕ್ತಿಯಿಂದ ಸಾವಿರಾರು ಜನರು ಸ್ವಾಗತಿಸಿ, ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ, ಅರ್ಚನೆ, ಮಹಾಮಂಗಳಾರತಿ ನೆರವೇರಿಸಿ ಸಕಲ ಸದ್ಭಕ್ತರಿಗೂ ಸುಖ ಶಾಂತಿ ನೆಮ್ಮದಿ ಕರುಣಿಸೆಂದು ಪ್ರಾರ್ಥಿಸಿದರು, ಗ್ರಾಮದ ಭಕ್ತರು ಜಗದ್ಗುರುಗಳ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದರು, ನಂತರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಗದ್ಗುರುಗಳು ಆಶೀರ್ವಚನ ದಯಪಾಲಿಸಿದರು, ವೇದಿಕೆಯಲ್ಲಿ ಅರಕಲಗೂಡು ತಾಲೂಕು ಉಪ್ಪಾರ ಸಂಘದ ಅಧ್ಯಕ್ಷರು, ಪ್ರಥಮ ದರ್ಜೆ ಗುತ್ತಿಗೆದಾರರು, ರಾಜ್ಯ ಭಗೀರಥ ಉಪ್ಪಾರ ಧಾರ್ಮಿಕ ಟ್ರಸ್ಟಿನ ನಿರ್ದೇಶಕರಾದ ಶ್ರೀ ವೆಂಕಟೇಶ್, ಬಿ ಎಸ್ ಪಿ ರಾಜ್ಯ ಪ್ರಧಾನಕಾರ್ಯದರ್ಶಿ ಶ್ರೀ ಹರೀಶ್, ಗಣ್ಯರು, ಉಪಸ್ಥಿತರಿದ್ದರು, 

ಸರ್ಕಾರದಿಂದ ಜಾತಿ ಸಮೀಕ್ಷೆಯ ನಿಖರ ಮಾಹಿತಿಯನ್ನ ಬೇಗನೆ ಪ್ರಕಟಿಸಿ : ನಾಗೇಶ್ ಪೂಜಾರಿ.

Image
ಜಾತಿ ಗಣತಿ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಆದರೆ ಸರ್ಕಾರದ ಮಾಹಿತಿ ಸೋರಿಕೆ ಮಾತ್ರ ಬೇಸರದ ಸಂಗತಿಯಾಗಿದೆ ಸರ್ಕಾರದ ಕಡೆಯಿಂದ ನಿಖರ ಮಾಹಿತಿಯನ್ನು ಪ್ರಕಟಿಸಿ ಎಂದು  ಭಗೀರಥ ಬ್ರಿಗೇಡ್ ಸಂಸ್ಥಾಪಕ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಬಂಗಾರದ ಪದಕ ವಿಜೇತ ನಾಗೇಶ್ ಪೂಜಾರಿ ಒತ್ತಾಯಿಸಿದ್ದಾರೆ.  ಜಾತಿ ಗಣತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಯಾಕೆಂದರೆ ಸದ್ಯ ಯಾವುದೇ ಒಂದು ಯೋಜನೆಗಳನ್ನು ಸಾಮಾನ್ಯ ಜನರಿಗೆ ಹಂಚಲು ಮೀಸಲಾತಿ ಮೂಲಕ ಒಳ್ಳೆಯ ನಿಖರ ಮಾಹಿತಿ ಬೇಕು ಅಂತಹ ಮಾಹಿತಿಯನ್ನ ಪಡೆಯಲು ತುಂಬಾ ಸಾಹಸ ಮಾಡಿ ಪ್ರತಿಯೊಂದು ಜಾತಿಯ ಮಾಹಿತಿಯನ್ನ ಪಡೆಯಲಾಗಿದೆ ಇಂತಹ ಮಾಹಿತಿ ಸರಕಾರದಿಂದ ಪ್ರಕಟ ಗೊಳ್ಳಬೇಕಿತ್ತು ಆದರೆ ಕೆಲವು ಮಾಧ್ಯಮಗಳು ಮೂಲಕವಾಗಿ ಅವೈಜ್ಞಾನಿಕ ಮಾಹಿತಿ ಪ್ರಕಟಗೊಳ್ಳುತ್ತದೆ ಅದು ತುಂಬಾ ಬೇಸರದ ಸಂಗತಿ ಎಂದು ಉಪ್ಪಾರ ಸಮಾಜದ ಯುವ ಮುಖಂಡರು ಮತ್ತು ಭಗೀರಥ ಬ್ರಿಗೇಡ್ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಯುತ ನಾಗೇಶ್ ಪೂಜಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  #ನಾಗೇಶಪೂಜಾರಿ #nageshpujari #bhagirathabrigade #bhagirathanews

Bhagiratha News

 Bhagiratha News #bhagirathanews

Bhagiratha

 Bhagiratha