ಎಸ್ ಎಸ ಯೇಲ ಸಿ ವಿದ್ಯಾರ್ಥಿ ಮಾಡಿದ್ದೇನು? ನೋಡಿ



ಬೆಳಗಾವಿಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೌಲ್ಯಮಾಪನ ಕೇಂದ್ರದಲ್ಲಿ 2025ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೇಪರನ್ನು ಚೆಕ್ ಮಾಡುವಾಗ ಪ್ಲೀಸ್ ನನ್ನನ್ನು ಪಾಸ್ ಮಾಡಿ ನನ್ನ ಲವ್ ನಿಮ್ಮ ಕೈಯಲ್ಲಿದೆ ಎಂದು ಬರವಣಿಗೆ ಜೊತೆಗೆ ಐದು ನೂರು ರುಪಾಯಿ ಹಣ ಪತ್ತೆಯಾಗಿವೆ. 
ರಾಜ್ಯದಲ್ಲಿ SSLC ಪರೀಕ್ಷಾ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಲಾಗುತ್ತಿದೆ. ಬೆಳಗಾವಿಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೌಲ್ಯಮಾಪನ ಕೇಂದ್ರದಲ್ಲಿ SSLC ಪರೀಕ್ಷಾ ಮೌಲ್ಯಮಾಪನ ವೇಳೆ ವಿಚಿತ್ರ ಉತ್ತರ ಪತ್ರಿಕೆಗಳು ಪತ್ತೆಯಾಗಿವೆ. ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಪಾಸ್ ಮಾಡುವಂತೆ ವಿಚಿತ್ರವಾಗಿ ಬೇಡಿಕೊಂಡಿದ್ದಾರೆ. ನನ್ನನ್ನು ಪಾಸ್ ಮಾಡಿದ್ರೆ ಅಷ್ಟೇ ನನ್ನ ಲವ್ ಮಾಡುತ್ತೇನೆ ಅಂದಿದ್ದಾಳೆ. ಪ್ಲೀಸ್ ಪಾಸ್ ಮಾಡಿ ನನ್ನ ಲವ್ ನಿಮ್ಮ ಕೈಯಲ್ಲಿದೆ ಎಂದು ಬರವಣಿಗೆ ಜತೆ ಐದು ನೂರು ರುಪಾಯಿ ಹಣ ಪತ್ತೆಯಾಗಿದೆ. 
ಐದು ನೂರು ರುಪಾಯಿ ನೀವು ಚಹಾ ಕುಡಿಯಿರಿ ಸರ್ ರಿ ನನ್ನ ಪಾಸ್ ಮಾಡಿ ಎಂದು ಒಂದು ಉತ್ತರ ಪತ್ರಿಕೆಯಲ್ಲಿ ಪತ್ತೆಯಾದರೇ, ಇನ್ನೊಂದು ಪತ್ರಿಕೆಯಲ್ಲಿ ನನ್ನ ಪಾಸ್ ಮಾಡಿದ್ರೆ ಹಣ ಕೊಡುತ್ತೇನೆ ಎಂದು ಬರೆಯಲಾಗಿದೆ. 
ಮತ್ತೊಂದು ಪತ್ರಿಕೆಯಲ್ಲಿ ಪ್ಲೀಸ್ ಮಿಸ್ ಅಂಡ್ ಸರ್ ನನ್ನನ್ನು ಪಾಸ್ ಮಾಡಿ ಎಂದು ಬರೆಯಲಾಗಿದ್ದು, ನೀವು ಪಾಸ್ ಮಾಡದಿದ್ದರೆ ನನ್ನ ಅಪ್ಪ ಅಮ್ಮ ಮುಂದೆ ಕಾಲೇಜಿಗೆ ಕಳಿಸಲ್ಲ. ಹೀಗೆ ಹಲವು ಚಿತ್ರ ವಿಚಿತ್ರ ಬರವಣಿಗೆಗಳು ಪತ್ತೆಯಾಗಿವೆ. ಸದ್ಯ ಈ ಉತ್ತರ ಪತ್ರಿಕೆಗಳು ಸಾಮಾಜೀಕ ಜಾಲತಾಣದಲ್ಲಿ ವೈರಲ್ ಆಗಿದೆ.

 

Comments

Popular posts from this blog

ಬಂತು ಹೊಸ ಕಾರ್ಡ್ ಯಾರಿಗೆ ಅಂತ ನೋಡಿ!

ಜನಿವಾರ ವಿಷಯ ಸಿಬ್ಬಂದಿ ಅಮಾನತ್ತಿಗೆ ಕಾರಣವಾಯಿತಾ?