ಕನ್ನಂಬಾಡಮ್ಮ ದೇವಿಯ ನೂತನ ದೇವಸ್ಥಾನ ಲೋಕಾರ್ಪಣೆ,

ಹಾಸನ ಜಿಲ್ಲಾ ಅರಕಲಗೂಡು ತಾಲೂಕು ಅತ್ನಿ, ಉಪ್ಪಾರ ಕೊಪ್ಪಲು ಗ್ರಾಮದಲ್ಲಿ ಇಂದು ಬೆಳಿಗ್ಗೆ ಶ್ರೀ ಆದಿಶಕ್ತಿ ಅಂತರಘಟ್ಟಮ್ಮ ದೇವಿ ಹಾಗೂ ಶ್ರೀ ಕನ್ನಂಬಾಡಮ್ಮ ದೇವಿಯ ನೂತನ ದೇವಸ್ಥಾನ ಲೋಕಾರ್ಪಣೆ, ಕಳಶರೋಹಣ, ಧಾರ್ಮಿಕ ಸಮಾರಂಭದಲ್ಲಿ ನೂರಾರು ಸುಮಂಗಳೆಯರು ಕಳಶ,
ಹಿಡಿದು ಕುಂಭಗಳನ್ನು ಹೊತ್ತು ದೇವರ ಉತ್ಸವ ಮೂರ್ತಿಯೊಂದಿಗೆ ಹೊಳೆ ಪೂಜೆ ಮಾಡಿಕೊಂಡು ಶ್ರೀ ಭಗೀರಥಗುರುಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಡಾ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳನ್ನು ಮೆರವಣಿಗೆ ಮೂಲಕ ಅದ್ದೂರಿಯಾಗಿ ಭಕ್ತಿಯಿಂದ ಸಾವಿರಾರು ಜನರು ಸ್ವಾಗತಿಸಿ, ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ, ಅರ್ಚನೆ, ಮಹಾಮಂಗಳಾರತಿ ನೆರವೇರಿಸಿ ಸಕಲ ಸದ್ಭಕ್ತರಿಗೂ ಸುಖ ಶಾಂತಿ ನೆಮ್ಮದಿ ಕರುಣಿಸೆಂದು ಪ್ರಾರ್ಥಿಸಿದರು, ಗ್ರಾಮದ ಭಕ್ತರು ಜಗದ್ಗುರುಗಳ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದರು, ನಂತರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಗದ್ಗುರುಗಳು ಆಶೀರ್ವಚನ ದಯಪಾಲಿಸಿದರು, ವೇದಿಕೆಯಲ್ಲಿ ಅರಕಲಗೂಡು ತಾಲೂಕು ಉಪ್ಪಾರ ಸಂಘದ ಅಧ್ಯಕ್ಷರು, ಪ್ರಥಮ ದರ್ಜೆ ಗುತ್ತಿಗೆದಾರರು, ರಾಜ್ಯ ಭಗೀರಥ ಉಪ್ಪಾರ ಧಾರ್ಮಿಕ ಟ್ರಸ್ಟಿನ ನಿರ್ದೇಶಕರಾದ ಶ್ರೀ ವೆಂಕಟೇಶ್, ಬಿ ಎಸ್ ಪಿ ರಾಜ್ಯ ಪ್ರಧಾನಕಾರ್ಯದರ್ಶಿ ಶ್ರೀ ಹರೀಶ್, ಗಣ್ಯರು, ಉಪಸ್ಥಿತರಿದ್ದರು, 

Comments

Popular posts from this blog

ಬಂತು ಹೊಸ ಕಾರ್ಡ್ ಯಾರಿಗೆ ಅಂತ ನೋಡಿ!

ಎಸ್ ಎಸ ಯೇಲ ಸಿ ವಿದ್ಯಾರ್ಥಿ ಮಾಡಿದ್ದೇನು? ನೋಡಿ

ಜನಿವಾರ ವಿಷಯ ಸಿಬ್ಬಂದಿ ಅಮಾನತ್ತಿಗೆ ಕಾರಣವಾಯಿತಾ?