ಯುವತಿಯೊಬ್ಬಳು ಆತ್ಮಹತ್ಯೆ
ಗದಗ : ಲವರ್ ಬ್ಲಾಕ್ಮೇಲ್ಗೆ ಹೆದರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದ್ದು. ಆತ್ಮಹತ್ಯೆಗೆ ಶರಣಾದ ಯುವತಿಯನ್ನು 29 ವರ್ಷದ ಸೈರಬಾನು ನದಾಫ್ ಎಂದು ಗುರುತಿಸಲಾಗಿದೆ.
ಗದಗ ಜಿಲ್ಲೆಯ, ಅಸುಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಮೃತ ಯುವತಿ ಸೈರಭಾನು ಖಾಸಗಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ನ್ಯಾಷನಲ್ ಲೇವಲ್ ಕುಸ್ತಿಪಟು ಆಗಿ ಖ್ಯಾತಿ ಪಡೆದಿದ್ದ ಸೈರಭಾನು. ಹತ್ತಾರು ಮೆಡಲ್, ಕಪ್ ಗೆದ್ದು ಸಾಕಷ್ಟು ಹೆಸರು ಮಾಡಿದ್ದಳು. ಮನೆಯಲ್ಲಿ ಗಂಡುಮಕ್ಕಳು ಇಲ್ಲದ ಕಾರಣ ಮನೆಯ ಎಲ್ಲಾ ಜವಬ್ದಾರಿಗಳನ್ನು ತಾನೇ ಹೊತ್ತಿದ್ದಳು.
ಕಳೆದ 5 ವರ್ಷಗಳಿಂದ ಮೈಲೇರಿ ಎಂಬಾತನನ್ನು ಪ್ರೀತಿ ಮಾಡುತ್ತಿದ್ದ ಸೈರಾಭಾನು. ಕಳೆದ ಕೆಲ ದಿನಗಳ ಹಿಂದೆ ಆತನಿಂದ ಬ್ರೇಕ್ಅಪ್ ಮಾಡಿಕೊಂಡಿದ್ದಳು. ಬ್ರೇಕ್ಮಾಡಿಕೊಂಡ ನಂತರ ಮನೆಯಲ್ಲಿ ನೋಡಿದ್ದ ಯುವಕನನ್ನು ಒಪ್ಪಿದ್ದ ಈಕೆ ಮದುವೆಗೂ ಸಿದ್ದತೆ ನಡೆಸಿದ್ದಳು. ಆದರೆ ಪ್ರೇಯಸಿಯ ಮದುವೆ ತಿಳಿದು ಆಕ್ರೋಶಗೊಂಡಿದ್ದ ಮೈಲೇರಿ ಇಬ್ಬರು ಜೊತೆಗಿದ್ದ ಪೋಟೋ, ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬ್ಲಾಕ್ಮೇಲ್ ಮಾಡಲು ಆರಂಭಿಸಿದ್ದನು.
ಇದರಿಂದ ಮಾನಸಿಕವಾಗಿ ಖಿನ್ನಳಾಗಿದ್ದ ಸೈರಾಭಾನು ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದು, ಪೋಷಕರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
Comments
Post a Comment